ಮೊದಲೊಂದಿಪೆ ನಿಮಗೆ ಗಣನಾಥ
ರಚನೆಕಾರ: ಶ್ರೀಪಾದರಾಜರು
ವರ್ಗ: ಗಣೇಶ
ಮೊದಲೊಂದಿಪೆ ನಿಮಗೆ ಗಣನಾಥ || ಪ ||
ನಮಗೆ ಬಂದ ವಿಘ್ನಗಳ ಕಳೆ ಗಣನಾಥ || ಅ.ಪ. ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ || ೧ ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿಮ್ಮ ಪಾದ
ಸಾಧಿಸಿದ ರಾಜ್ಯ ಗಣನಾಥ || ೨ ||
ಮಂಗಳ ಮೂರುತಿ ಗುರು ರಂಗವಿಠಲನ್ನ ಪಾದ
ಭೃಂಗನೆ ಪಾಲಿಸೊ ಗಣನಾಥ || ೩ ||
ನಮಗೆ ಬಂದ ವಿಘ್ನಗಳ ಕಳೆ ಗಣನಾಥ || ಅ.ಪ. ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ || ೧ ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿಮ್ಮ ಪಾದ
ಸಾಧಿಸಿದ ರಾಜ್ಯ ಗಣನಾಥ || ೨ ||
ಮಂಗಳ ಮೂರುತಿ ಗುರು ರಂಗವಿಠಲನ್ನ ಪಾದ
ಭೃಂಗನೆ ಪಾಲಿಸೊ ಗಣನಾಥ || ೩ ||