ಮೂರುತಿಯನೆ ನಿಲ್ಲಿಸೋ ಮಾಧವ

ರಚನೆಕಾರ: ಪುರಂದರದಾಸರು

ಗಾಯನ: ಶಶಿಕಾಂತ ರಾವ್

ವರ್ಗ: ಶ್ರೀಕೃಷ್ಣ

ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ
ಮೂರುತಿಯನೆ ನಿಲ್ಲಿಸೋ || ಪ ||

ಎಳೆತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ || ೧ ||

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯು ಉರದಲೊಪ್ಪುವ ನಿನ್ನ || ೨ ||

ಭಕ್ತ ಕಲ್ಪತರು ಭಕ್ತರ ಸುರಧೇನು
ಮುಕ್ತಿದಾಯಕ ನಮ್ಮ ಪುರಂದರವಿಠಲ ನಿನ್ನ || ೩ ||