ಮೋಸ ಹೋದೆನಲ್ಲ
ರಚನೆಕಾರ: ಶ್ರೀಪಾದರಾಜರು
ವರ್ಗ: ಶ್ರೀಕೃಷ್ಣ
ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ
ಭಾಸುರಾಂಗ ಶ್ರೀ ವಾಸುಕಿಶಯನನ
ಸಾಸಿರ ನಾಮವ ಲೇಸಾಗಿ ಪಠಿಸದೆ || ಪ ||
ದುಷ್ಟ ಜನರ ಕೂಡಿ ನಾನತಿ
ಭ್ರಷ್ಟನಾದೆ ನೋಡಿ
ಶ್ರೇಷ್ಠರೂಪ ಮುರ ಮುಷ್ಟಿಕ ವೈರಿಯ
ನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ || ೧ ||
ಕಾಯವು ಸ್ಥಿರವಲ್ಲ ಎನ್ನೊಳು
ಮಾಯೆ ತುಂಬಿತಲ್ಲ
ಪ್ರಾಯಮದದಿ ಪರಸ್ತ್ರೀಯರ ಕೂಡಾಡಿ
ಕಾಯಜಜನಕನ ಗಾಯನ ಮಾಡದೆ || ೨ ||
ಕಂಗಳಿಂದಲಿ ನೋಡೋ ದೇವ ನಿ
ನ್ನಂಗಸಂಗವ ನೀಡೋ
ಮಂಗಳಮಹಿಮ ಶ್ರೀರಂಗವಿಠಲ ಮುಂ
ದಂಗಬಾರದಂತೆ ನೀ ದಯ ಮಾಡೋ || ೩ ||
ಭಾಸುರಾಂಗ ಶ್ರೀ ವಾಸುಕಿಶಯನನ
ಸಾಸಿರ ನಾಮವ ಲೇಸಾಗಿ ಪಠಿಸದೆ || ಪ ||
ದುಷ್ಟ ಜನರ ಕೂಡಿ ನಾನತಿ
ಭ್ರಷ್ಟನಾದೆ ನೋಡಿ
ಶ್ರೇಷ್ಠರೂಪ ಮುರ ಮುಷ್ಟಿಕ ವೈರಿಯ
ನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ || ೧ ||
ಕಾಯವು ಸ್ಥಿರವಲ್ಲ ಎನ್ನೊಳು
ಮಾಯೆ ತುಂಬಿತಲ್ಲ
ಪ್ರಾಯಮದದಿ ಪರಸ್ತ್ರೀಯರ ಕೂಡಾಡಿ
ಕಾಯಜಜನಕನ ಗಾಯನ ಮಾಡದೆ || ೨ ||
ಕಂಗಳಿಂದಲಿ ನೋಡೋ ದೇವ ನಿ
ನ್ನಂಗಸಂಗವ ನೀಡೋ
ಮಂಗಳಮಹಿಮ ಶ್ರೀರಂಗವಿಠಲ ಮುಂ
ದಂಗಬಾರದಂತೆ ನೀ ದಯ ಮಾಡೋ || ೩ ||