ಮುಟ್ಟಬೇಡ ಮುಟ್ಟಬೇಡ
ರಚನೆಕಾರ: ಕನಕದಾಸರು
ವರ್ಗ: ಉಪದೇಶಾತ್ಮಕ
ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು || ಪ ||
ಕಟ್ಟು ಮಾಡಿದ ಯಮನು ತನ್ನ ದೂತರಿಗೆ || ಅ.ಪ. ||
ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರ
ಸಿರಿ ತುಳಸಿ ವನಮಾಲೆಯಿಂದೊಪ್ಪುವ
ವರತಿರುಮಂತ್ರ ತೀರ್ಥಪ್ರಸಾದಕೊಳಗಾದವರ
ತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ || ೧ ||
ಬಡವರಾಗಲಿ ಭಾಗ್ಯವಂತರಾಗಲಿ ಅವರು
ಕಡು ಕರ್ಮಿ ಘೋರಪಾತಕರಾಗಲಿ ನಡೆ
ನುಡಿಗೆ ಮಾಧವನ ಬಿಡದೆ ಕೊಂಡಾಡುವರ
ಗೊಡವೆ ಬೇಡೆಂದು ಯಮಧರ್ಮ ಸಾರಿದನು || ೨ ||
ವಾಸುದೇವನ ವಾಸರವನಾಚರಿಸುವ
ವರ ಬೇಸರಿಸದೆ ಹರಿ ಪ್ರಸಂಗ ಮಾಳ್ಪವರ
ಶೇಷಶಯನ ಕಾಗಿನೆಲೆಯಾದಿಕೇಶವನ
ದಾಸಾನುದಾಸರಿಗೆ ದಾಸರಾದವರ || ೩ ||
ಕಟ್ಟು ಮಾಡಿದ ಯಮನು ತನ್ನ ದೂತರಿಗೆ || ಅ.ಪ. ||
ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರ
ಸಿರಿ ತುಳಸಿ ವನಮಾಲೆಯಿಂದೊಪ್ಪುವ
ವರತಿರುಮಂತ್ರ ತೀರ್ಥಪ್ರಸಾದಕೊಳಗಾದವರ
ತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ || ೧ ||
ಬಡವರಾಗಲಿ ಭಾಗ್ಯವಂತರಾಗಲಿ ಅವರು
ಕಡು ಕರ್ಮಿ ಘೋರಪಾತಕರಾಗಲಿ ನಡೆ
ನುಡಿಗೆ ಮಾಧವನ ಬಿಡದೆ ಕೊಂಡಾಡುವರ
ಗೊಡವೆ ಬೇಡೆಂದು ಯಮಧರ್ಮ ಸಾರಿದನು || ೨ ||
ವಾಸುದೇವನ ವಾಸರವನಾಚರಿಸುವ
ವರ ಬೇಸರಿಸದೆ ಹರಿ ಪ್ರಸಂಗ ಮಾಳ್ಪವರ
ಶೇಷಶಯನ ಕಾಗಿನೆಲೆಯಾದಿಕೇಶವನ
ದಾಸಾನುದಾಸರಿಗೆ ದಾಸರಾದವರ || ೩ ||