ಮುಟ್ಟದಿರೊ ಎನ್ನನು

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಮುಟ್ಟದಿರೊ ಎನ್ನನು – ರಂಗಯ್ಯ
ಮುಟ್ಟದಿರೊ ಎನ್ನನು || ಪ ||

ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ
ಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ || ಅ.ಪ. ||

ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆ
ಸತ್ಯವ ಮಾಡದಿರೊ – ಹೇ ಸರಿನಂಟ
ನೂರೆಂಟ ಬಣ್ಣದ ಬಂಟ ಬಿಡು ಎನ್ನ ಗಂಟ || ೧ ||

ಹಡೆದವರ ತಲೆಗೆ ಮರಳು ಚೆಲ್ಲಿದಂತೆ
ಮಡದೇರ ಕೂಡ್ಯಾಡಿ – ಕಲಿತ್ಯೆಲ್ಲೊ
ಮಿರುಗ ದಿಮ್ಮದಿರುಗ
ಸೊಕ್ಕಿ ಮುರುಗ ಬಿಡು ಎನ್ನ ಸೆರಗ || ೨ ||

ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆ
ಸಿಂಗಾರವಾದುದ ಕಂಡೆ
ಕಲೆಯ ಕಾಗಿನೆಲೆಯ
ಬಟ್ಟಮೊಲೆಯ ಕನಕಯ್ಯನಿಗೊಲೆಯ || ೩ ||