ನಾ ಮಾಡಿದ ಕರ್ಮ
ರಚನೆಕಾರ: ಪುರಂದರದಾಸರು
ವರ್ಗ: ಉಪದೇಶಾತ್ಮಕ
ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವ || ಪ ||
ಸಾಮಾನ್ಯವಲ್ಲಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ || ೧ ||
ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ ಪರ
ಸತಿಯರ ಸಂಘಗಳ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿಯಾವುದಿನ್ನು ಗರುಡಗಮನ ಕೃಷ್ಣ || ೨ ||
ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾದಿ ಜಪ ತಪವ ನೀಗಿ
ದಾನವಾಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆ ಮನೆ ತಿರುಗತಲಿದ್ದೆ || ೩ ||
ಇನ್ನಾದರೂ ನಿನ್ನ ದಾಸರ ಸಂಘವಿಟ್ಟು
ಮನ್ನಿಸಿ ಸಲಹಯ್ಯ ಮನ್ಮಥಜನಕ
ಅನ್ಯರೊಬ್ಬರ ಕಾಣೆ ಆಧರಿಸುವರಿಲ್ಲ
ಪನ್ನಗಶಯನ ಪುರಂದರ ವಿಠ್ಠಲ || ೪ ||
ನೀ ಮಾಡುವುದೇನೋ ದೇವ || ಪ ||
ಸಾಮಾನ್ಯವಲ್ಲಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ || ೧ ||
ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ ಪರ
ಸತಿಯರ ಸಂಘಗಳ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿಯಾವುದಿನ್ನು ಗರುಡಗಮನ ಕೃಷ್ಣ || ೨ ||
ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾದಿ ಜಪ ತಪವ ನೀಗಿ
ದಾನವಾಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆ ಮನೆ ತಿರುಗತಲಿದ್ದೆ || ೩ ||
ಇನ್ನಾದರೂ ನಿನ್ನ ದಾಸರ ಸಂಘವಿಟ್ಟು
ಮನ್ನಿಸಿ ಸಲಹಯ್ಯ ಮನ್ಮಥಜನಕ
ಅನ್ಯರೊಬ್ಬರ ಕಾಣೆ ಆಧರಿಸುವರಿಲ್ಲ
ಪನ್ನಗಶಯನ ಪುರಂದರ ವಿಠ್ಠಲ || ೪ ||