ನಾಚಿಕೆ ಪಡಬೇಡ

ರಚನೆಕಾರ: ಪುರಂದರದಾಸರು

ಗಾಯನ: ಶ್ರೀನಿಧಿ ರಾವ್

ವರ್ಗ: ವಿಷ್ಣು

ನಾಚಿಕೆ ಪಡಬೇಡ
ಮನದಲಿ ಯೋಚಿಸಿ ಕೆಡಬೇಡ || ಪ ||

ಸಾರೋದ್ಧಾರ ಸರ್ವೇಶನ ನಾಮವ
ಮೆಚ್ಚಿಕೊಂಡರೆ ಹೆಚ್ಚಿನ ಫಲವೀವ || ಅ.ಪ ||

ಹರಿ ಹರಿ ಎಂದೊದರೋ
ಹತ್ತಿದ ದುರಿತಗಳಿಗೆ ಬೆದರೋ |
ನೀರಜಾಕ್ಷ ನಿರ್ಜರ ಪತಿ ಹರಿ ಎಂದು
ಬಾರಿ ಬಾರಿಗೆ ಕೊಂಡಾಡಿ ಕುಣಿಯೋ || ೧ ||

ಯಾರ ಗೊಡವೆಯೇಕೋ
ನರಕದ ಬಾದೆ ತಪ್ಪಿಪರೇನೋ |
ಸಾರೋದ್ಧಾರ ಸರ್ವೇಶನ ನಾಮವ
ಸಾರಿ ಸಾರಿಗೆ ಕೊಂಡಾಡಿ ಕುಣಿಯೋ || ೨ ||

ಭಕ್ತ ಜನರ ಕೂಡೋ
ಭವ ಭಯ ಬತ್ತಿ ಪೋಪುದು ನೋಡೋ |
ಮುಕ್ತಿದಾಯಕ ಶ್ರೀ ಪುರಂದರ ವಿಠಲನ
ಭಕ್ತಿಯಿಂದ ಕೊಂಡಾಡಿ ಕುಣಿಯೋ || ೩ ||