ನಂಬಿದೆನು ರಾಮ ನಿನ್ನ

ರಚನೆಕಾರ: ವಿದ್ಯೇಶ ತೀರ್ಥರು

ಗಾಯನ: ಅತ್ರೇಶ್ ಶಾನುಭೋಗ

ವರ್ಗ: ಶ್ರೀರಾಮ

ನಂಬಿದೆನು ರಾಮ ನಿನ್ನ
ಅಂಬಿಗನೆ ಸಲಹೆನ್ನ || ಪ ||

ಭವ ಸಾಗರ ಭೀಕರ
ಅವಗುಣ-ನಕ್ರಾಕರ
ನೋವಿನಲೆಗಳಾಕರ
ನಾವೆ ನೀಡು ಕರುಣಾಕರ || ೧ ||

ತವ ಚಿಂತನ ದುಷ್ಕರ
ಅವನಿ ಚಿಂತೆ ನಿರಂತರ
ಭವಸಾಗರ ದುಸ್ತರ
ನಾವೆ ನೀಡು ಕರುಣಾಕರ || ೨ ||

ಕ್ಷಾಮಧಾಮ ಭವದಧಾಮ
ಕ್ಷೇಮಕ್ಷಾಮ ಭವಾಬ್ಧಿಯಲಿ
ಕಾಮದಾಹ ಸತತ ಇಲ್ಲಿ
ಕ್ಷೇಮಧಾಮ ನಾವೆ ನೀಡು || ೩ ||

ರಾಮ ನಿನ್ನ ದಿವ್ಯ ಪಾದ
ಭೀಮ ಭವ ಸಿಂಧು ಪಾರ
ಭೂಮ ಭವ ಸಿಂಧು ನೌಕ
ಶ್ಯಾಮ ಅದನು ಬೇಗ ನೀಡು || ೪ ||

ಅವತಾರ ಕಥಾ ಶ್ರವಣ
ಭಾವಜಲ ಪ್ರಸ್ರವಣ
ಭವಜಲಧಿ ದಾಟಲು
ಪ್ಲವ ದೇವ ಕರುಣಿಸೆನಗೆ || ೫ ||

ಮುನಿಸ್ತ್ರೀ ವಿರೂಪಹಾರಿ
ಮನಃಪ್ರಸನ್ನತಾಕಾರಿ
ಅನಾದಿ ವಸ್ತ್ರ ವಿದಾರಿ
ಘನಪದ ನೀಡು ಭವಾರಿ || ೬ ||

ಹನುಮಾನುಯಾಯಿ ಪಾದ
ಸನಕ ಚಿಂತಿತ ಪಾದ
ಕನಕ ಕೀರ್ತಿತ ಪಾದ
ಪಿನಾಕಿನತ ಪಾದ ನೀಡು || ೭ ||

ವನಕೆ ಧಾವಿಸಿದ ಪಾದ
ಮುನಿ ಕುಟೀರ ತೀರ್ಥ ಪಾದ
ಜಾನಕೀ ಎದೆಗೊಪ್ಪುವ ಪಾದ
ಜ್ಞಾನ-ಸುಖದ ಪಾದ ನೀಡು || ೮ ||

ಅನಸುತಾಂಚಿತ ಪಾದ
ಸನ್ಮನೋರಂಜಿತ ಪಾದ
ನಿನ್ನ ಪಾದ ನೌಕ ಪಾರ
ಅನನ್ಯ ವಿದ್ಯೇಶ ವಿಠ್ಠಲ || ೯ ||