ನಮ್ಮಮ್ಮ ಶಾರದೆ
ರಚನೆಕಾರ: ಕನಕದಾಸರು
ಗಾಯನ: ಶ್ರೀನಿಧಿ ರಾವ್
ವರ್ಗ: ಗಣೇಶ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ || ಪ ||
ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮಯ ಗಣನಾಥನೆ ಕಣಮ್ಮ || ಅ.ಪ ||
ಮೋರೆ ಕಪ್ಪಿನ ಭಾವ ಮೊರದಗಲ ಕಿವಿ ಕೋರೆ ದಾಡೆಯನ್ಯಾರಮ್ಮ
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನಧೀರ ತಾ ಗಣನಾಥನೆ ಕಣಮ್ಮ || ೧ ||
ಉಟ್ಟ ದಟ್ಟಿಯು ಬಿಗಿದುಟ್ಟ ಚಲ್ಲಣದ ದಿಟ್ಟ ತಾನಿವನ್ಯಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನೆ ಹೊಟ್ಟೆಯ ಗಣನಾಥನೆ ಕಣಮ್ಮ || ೨ ||
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲಭಾಷಿಗನಿವನ್ಯಾರಮ್ಮ
ಲೇಸಾಗಿ ಜನರ ಸಲಹುವ ನೆಲೆಯಾದಿಕೇಶವನ ದಾಸ ಕಾಣೆ ಅಮ್ಮಯ್ಯ || ೩ ||