ನಂದನಂದನ ಪಾಹಿ ಗುಣವೃಂದ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ನಂದನಂದನ ಪಾಹಿ ಗುಣವೃಂದ
ಸುಂದರರೂಪ ಗೋವಿಂದ ಮುಕುಂದ || ಪ ||

ದಿನಕರಭವಪಾಲ ಕನಕಾಂಕಿತ ಚೇಲ
ಜನಕಜಾಲೋಲ ಜನಕಾನುಕೂಲ || ೧ ||

ಪವನಜಪರಿವಾರ ಯವನವಿದಾರ
ನವರತ್ನಹಾರ ನವನೀತಚೋರ || ೨ ||

ತುಂಗ ವಿಹಂಗ ತುರಂಗ ದಯಾಪಾಂಗ
ರಂಗವಿಠಲ ಭವಭಂಗ ಶುಭಾಂಗ || ೩ ||