ನಂದನಂದನ ವಿಮಲ

ರಚನೆಕಾರ: ವಿದ್ಯೇಶ ತೀರ್ಥರು

ಗಾಯನ: ಅತ್ರೇಶ್ ಶಾನುಭೋಗ

ವರ್ಗ: ಶ್ರೀಕೃಷ್ಣ

ನಂದನಂದನ ವಿಮಲ ಸದ್ಗುಣಸಾಂದ್ರ ಶ್ಯಾಮಲಾಂಗ ವಿಷ್ಣೋ || ಪ ||

ಆನಂದತೀರ್ಥ ಕರಕಮಲಾಂಚಿತ ಚಾರುಚರಣ ವೃಷ್ಣೇ |
ಮಂದಸುಹಸಿತ ಮಂಥಪಾಶಧರ ಶೃಂಗಾರಸಾರ ಜಿಷ್ಣೋ |
ವೃಂದಾವನಾಂಚಾನ ಪ್ರಣತಿರಸ್ತುತೇ ದೋಷದಹನ ಕೃಷ್ಣ || ೧ ||

ಉಡುಪಿ ಕೃಷ್ಣ ಜಗದೊಡೆಯ ನಿನ್ನ ನಾಡ ಮಂಗಳಪೂಜೆಯ |
ನಡು ಹೃದಯದಲಿ ನೆಲೆಸಿ ನಡುಮನೆಯವರ ಮುಖದಿ |
ಕೊಡುಗೈಯಿಂದ ಭಾವಸಡಗರದಲಿ ಮಾಡಿ ಸಂತುಷ್ಟನಾಗು |
ಬೇಡುವೆ ನಿಖಿಲೇಶ ತವ ಭಾವ-ತೃಪ್ತಿ ಬಂಗಾರ ಭಂಡಾರವ || ೨ ||

ಬಂಧಕ ವಿಷಯ ಪಂಚಕ ಕಿಂಕರನಾಗಿ ಪಂಚಪರ್ವ ಶತ್ರೋ |
ಬೆಂದು ಬೆಂದು ಬಲುನೊಂದೆ ಕೃಷ್ಣ ಕಟುಭವದ ಬೇಗುದಿಯಲ್ಲಿ |
ಸುಂದರಾನನ ಯದುಕುಲ ಮಲಯ ಚಂದನ ಇಂದಿರೇಶನೇ |
ಇಂದುಧರ ವಿದ್ಯೇಶ ವಿಠಲ ಕಾಯೋ ಈ ಕಂದನ ಶ್ರೀಕಾಂತನೇ || ೩ ||