ನಾರಾಯಣ ನಿನ್ನ ನಾಮದ ಸ್ಮರಣೆಯ
ರಚನೆಕಾರ: ಪುರಂದರದಾಸರು
ಗಾಯನ: ಶಾಂಭವಿ ರಾವ್
ವರ್ಗ: ವಿಷ್ಣು
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ || ಪ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟಿರಲಿ |
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾಮಂತ್ರದ ನಾಮವ || ೧ ||
ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಕೆಟ್ಟಿರಲಿ ಮುನಿದಿರಲಿ |
ಜನಕಜಾಪತಿ ನಿನ್ನ ನಾಮದ ಸ್ಮರಣೆಯ
ಮನಸಿನೊಳಗೆ ಒಮ್ಮೆ ನೆನೆಯುವ ಹಾಗೆ || ೨ ||
ಸಂತತ ಹರಿ ನಿನ್ನ ಸಾಸಿರನಾಮವ
ಅಂತರಂಗದೊಳು ಒಳಗಿರಿಸಿ |
ಎಂತೋ ಶ್ರೀ ಪುರಂದರವಿಠ್ಠಲರಾಯನೇ
ಅಂತ್ಯಕಾಲದಲ್ಲಿ ಚಿಂತಿಸೋ ಹಾಂಗೆ || ೩ ||
ಸಾರಾಮೃತವೆನ್ನ ನಾಲಿಗೆಗೆ ಬರಲಿ || ಪ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟಿರಲಿ |
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾಮಂತ್ರದ ನಾಮವ || ೧ ||
ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಕೆಟ್ಟಿರಲಿ ಮುನಿದಿರಲಿ |
ಜನಕಜಾಪತಿ ನಿನ್ನ ನಾಮದ ಸ್ಮರಣೆಯ
ಮನಸಿನೊಳಗೆ ಒಮ್ಮೆ ನೆನೆಯುವ ಹಾಗೆ || ೨ ||
ಸಂತತ ಹರಿ ನಿನ್ನ ಸಾಸಿರನಾಮವ
ಅಂತರಂಗದೊಳು ಒಳಗಿರಿಸಿ |
ಎಂತೋ ಶ್ರೀ ಪುರಂದರವಿಠ್ಠಲರಾಯನೇ
ಅಂತ್ಯಕಾಲದಲ್ಲಿ ಚಿಂತಿಸೋ ಹಾಂಗೆ || ೩ ||