ನೀಲಲೋಹಿತ
ರಚನೆಕಾರ: ಜಗನ್ನಾಥದಾಸರು
ಗಾಯನ: ಶಶಿಕಾಂತ ರಾವ್
ವರ್ಗ: ಈಶ್ವರ
ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ || ಪ ||
ಫಾಲನಯನ ಶುಂಡಾಲ ಚರ್ಮ ಸುದು
ಕೂಲ ಮೃಡ ಸತತ ಪಾಲಿಸು ಕರುಣದಿ || ಅ.ಪ ||
ನಂದಿವಾಹನ ನಮಿಪೆ ಖಳ
ವೃಂದ ಮೋಹನ
ಅಂಧಕರಿಪು ಶಿಖಿ ಸ್ಯಂದನ ಜನಕ ಸ
ನಂದನಾದಿ ಮುನಿ ವಂದಿತ ಪದಯುಗ || ೧ ||
ಸೋಮಶೇಖರ ಗಿರಿಜಾಸು
ತ್ರಾಮ ಲೇಖರಾ
ಸ್ತೋಮವಿನುತ ಭವ ಭೀಮ ಭಯಾಂತಕ
ಕಾಮರಹಿತ ಗುಣಧಾಮ ದಯಾನಿಧೆ || ೨ ||
ನಾಗಭೂಷಣ ವಿಮಲ ಸ
ರಾಗ ಭಾಷಣ
ಭೋಗಿಶಯನ ಜಗನ್ನಾಥ ವಿಠಲನ
ಯೋಗದಿ ಒಲಿಸುವ ಭಾಗವತರೊಳಿಡೊ || ೩ ||
ಫಾಲನಯನ ಶುಂಡಾಲ ಚರ್ಮ ಸುದು
ಕೂಲ ಮೃಡ ಸತತ ಪಾಲಿಸು ಕರುಣದಿ || ಅ.ಪ ||
ನಂದಿವಾಹನ ನಮಿಪೆ ಖಳ
ವೃಂದ ಮೋಹನ
ಅಂಧಕರಿಪು ಶಿಖಿ ಸ್ಯಂದನ ಜನಕ ಸ
ನಂದನಾದಿ ಮುನಿ ವಂದಿತ ಪದಯುಗ || ೧ ||
ಸೋಮಶೇಖರ ಗಿರಿಜಾಸು
ತ್ರಾಮ ಲೇಖರಾ
ಸ್ತೋಮವಿನುತ ಭವ ಭೀಮ ಭಯಾಂತಕ
ಕಾಮರಹಿತ ಗುಣಧಾಮ ದಯಾನಿಧೆ || ೨ ||
ನಾಗಭೂಷಣ ವಿಮಲ ಸ
ರಾಗ ಭಾಷಣ
ಭೋಗಿಶಯನ ಜಗನ್ನಾಥ ವಿಠಲನ
ಯೋಗದಿ ಒಲಿಸುವ ಭಾಗವತರೊಳಿಡೊ || ೩ ||