ನೀನುಪೇಕ್ಷೆಯ ಮಾಡೆ
ರಚನೆಕಾರ: ಕನಕದಾಸರು
ಗಾಯನ: ಯು ಶಾಂತ
ವರ್ಗ: ವಿಷ್ಣು
ನೀನುಪೇಕ್ಷೆಯ ಮಾಡೆ ಬೇರೆ ಗತಿ
ಯಾರೆನಗೆ ನಿಗಮಗೋಚರ ಮುಕುಂದ || ಪ ||
ಗಾನರಸಲೋಲ ಆಗಮಶೀಲ
ಭಕ್ತಪರಿಪಾಲ ಗೋಪಾಲ ಬಾಲಲೀಲ || ಅ.ಪ||
ಜಪತಪಾನುಷ್ಠಾನ ಜಪಿತನೆಂದೆನಿಸುವರೆ
ಜಾಣತನವದರೊಳಗಿಲ್ಲ
ಅಪರಿಮಿತಕರ್ಮವನು ಅನುಸರಿಸಿ
ನಡೆವುದಕೆ ನಿಪುಣತ್ವ ಮೊದಲೇ ಇಲ್ಲ
ಗುಪಿತದಲಿ ದಾನಧರ್ಮವ ಮಾಳ್ಪೆನೆಂದರೆ
ಘನವಾದ ಧನವು ಇಲ್ಲ
ಚಪಲ ನಿಪುಣತ್ವ ಜಾಣತ್ವವಿಲ್ಲದಿಹ
ಸುಪವಿತ್ರ ನೀನೆ ಅಲ್ಲದಿಲ್ಲ || ೧ ||
ಆನೆ ಮೊಸಳೆಗೆ ಸಿಲ್ಕಿ ಅರೆಬಾಯಿ ಬಿಡುತಿರಲು
ಮೌನದಲಿ ಬಂದು ಕಾಯ್ದೆ
ಏ ನಾರಣ ಎಂದಡೆ ಅಜಾಮಿಳಗೆ ಮುಕ್ತಿಯನು
ನೀನೊಲಿದು ಕರುಣಿಸಿತ್ತೆ
ದಾನವೇಂದ್ರನ ಕೈಯ ಕಡುನೊಂದ ಪ್ರಹ್ಲಾದಗೆ
ನೀನೊಲಿದು ಪದವನಿತ್ತೆ
ದಾನವಾಂತಕ ದಿವಿಜಮುನಿವಂದಿತನೆ ನೀನು
ಎನ್ನನು ಸಲಹದೇ ಬರಿದೆ || ೨ ||
ಈಷಣತ್ರಯದ ಬಯಲಾಸೆಯಲಿ ಮನಸೋತು
ಬೇಸರಿದೆ ಮನದಿ ನೊಂದು
ಹೇಸಿಕೆಯ ಸಂಸಾರಸಾಗರದೊಳಗೆ ಬಿದ್ದು
ಘಾಸಿಯಾದೆ ನಾನಿಂದು
ಆಸೆಯನು ಬಿಡದೆ ಕಡುಮೋಸದಲಿ ಸಿಲುಕಿರುವ
ವಾಸಿಲ್ಲದವನ ಇಂದು
ದಾಸನೆನಿಸಿಯೆ ಡಂಗುರವ ಹೊಯ್ಯಲು
ಆದಿಕೇಶವನು ನೀನೆ ಹರಿಯೆ ದೊರೆಯೆ || ೩ ||
ಯಾರೆನಗೆ ನಿಗಮಗೋಚರ ಮುಕುಂದ || ಪ ||
ಗಾನರಸಲೋಲ ಆಗಮಶೀಲ
ಭಕ್ತಪರಿಪಾಲ ಗೋಪಾಲ ಬಾಲಲೀಲ || ಅ.ಪ||
ಜಪತಪಾನುಷ್ಠಾನ ಜಪಿತನೆಂದೆನಿಸುವರೆ
ಜಾಣತನವದರೊಳಗಿಲ್ಲ
ಅಪರಿಮಿತಕರ್ಮವನು ಅನುಸರಿಸಿ
ನಡೆವುದಕೆ ನಿಪುಣತ್ವ ಮೊದಲೇ ಇಲ್ಲ
ಗುಪಿತದಲಿ ದಾನಧರ್ಮವ ಮಾಳ್ಪೆನೆಂದರೆ
ಘನವಾದ ಧನವು ಇಲ್ಲ
ಚಪಲ ನಿಪುಣತ್ವ ಜಾಣತ್ವವಿಲ್ಲದಿಹ
ಸುಪವಿತ್ರ ನೀನೆ ಅಲ್ಲದಿಲ್ಲ || ೧ ||
ಆನೆ ಮೊಸಳೆಗೆ ಸಿಲ್ಕಿ ಅರೆಬಾಯಿ ಬಿಡುತಿರಲು
ಮೌನದಲಿ ಬಂದು ಕಾಯ್ದೆ
ಏ ನಾರಣ ಎಂದಡೆ ಅಜಾಮಿಳಗೆ ಮುಕ್ತಿಯನು
ನೀನೊಲಿದು ಕರುಣಿಸಿತ್ತೆ
ದಾನವೇಂದ್ರನ ಕೈಯ ಕಡುನೊಂದ ಪ್ರಹ್ಲಾದಗೆ
ನೀನೊಲಿದು ಪದವನಿತ್ತೆ
ದಾನವಾಂತಕ ದಿವಿಜಮುನಿವಂದಿತನೆ ನೀನು
ಎನ್ನನು ಸಲಹದೇ ಬರಿದೆ || ೨ ||
ಈಷಣತ್ರಯದ ಬಯಲಾಸೆಯಲಿ ಮನಸೋತು
ಬೇಸರಿದೆ ಮನದಿ ನೊಂದು
ಹೇಸಿಕೆಯ ಸಂಸಾರಸಾಗರದೊಳಗೆ ಬಿದ್ದು
ಘಾಸಿಯಾದೆ ನಾನಿಂದು
ಆಸೆಯನು ಬಿಡದೆ ಕಡುಮೋಸದಲಿ ಸಿಲುಕಿರುವ
ವಾಸಿಲ್ಲದವನ ಇಂದು
ದಾಸನೆನಿಸಿಯೆ ಡಂಗುರವ ಹೊಯ್ಯಲು
ಆದಿಕೇಶವನು ನೀನೆ ಹರಿಯೆ ದೊರೆಯೆ || ೩ ||