ನಿನ್ನ ನಾನೇನೆಂದೆನೊ
ರಚನೆಕಾರ: ಕನಕದಾಸರು
ವರ್ಗ: ವಿಷ್ಣು
ನಿನ್ನ ನಾನೇನೆಂದೆನೊ – ರಂಗಯ್ಯ ರಂಗ
ನಿನ್ನ ನಾನೇನೆಂದೆನೊ || ಪ ||
ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ
ಪನ್ನಗಶಯನ ಪಾಲ್ಗಡಲೊಡೆಯನೆ ರಂಗ || ಅ.ಪ. ||
ಧೀರ ಸೋಮಕ ವೇದಚೋರ ಖಳನನು ಸೀಳಿ
ವಾರಿಧಿಗಿಳಿದು ಪರ್ವತವನೆತ್ತಿ
ಧಾರಿಣಿಯನು ಕದ್ದ ದನುಜ ದಲ್ಲಣನಾದ
ನಾರಸಿಂಹ ನಿನಗೆ ನಮೊ ಎಂದೆನಲ್ಲದೆ
ನೀರ ಪೊಕ್ಕವನೆಂದೆನೆ – ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ –
ಮಣ್ಣನಗೆದು ಬೇರ ಮೆದ್ದವನೆಂದೆನೆ – ರಕ್ಕಸನೊಳು
ಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ || ೧ ||
ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿ
ಪರಶು ಪಿಡಿದು ಕ್ಷತ್ರಿಯರ ಸವರಿ
ಚರಣದಿ ಪಾಷಾಣ ಪೆಣ್ಣು ಮಾಡಿದ ಪುಣ್ಯ
ಚರಿತ ಯಾದವಪತಿ ಶರಣೆಂದೆನಲ್ಲದೆ
ತಿರುಕ ಹಾರುವನೆಂದೆನೆ – ಹೆತ್ತ ತಾಯ ಶಿರವ ತರಿದನೆಂದೆನೆ –
ವನವಾಸಕೆ ಭರದಿ ಚರಿಸಿದನೆಂದೆನೆ – ಪೂತನಿಯನು
ಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ || ೨ ||
ಚಿತ್ತಜಕೋಟಿ ಲಾವಣ್ಯ ಮುಪ್ಪುರದ
ಉತ್ತಮಸ್ತ್ರೀಯರ ವ್ರತವಳಿದು
ಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದ
ಹತ್ತವತಾರದ ಹರಿಯೆಂದೆನಲ್ಲದೆ
ಬತ್ತಲೆ ನಿಂತವನೆಂದೆನೆ – ತೇಜಿಯನೇರಿ
ಒತ್ತಿ ನಡೆದವನೆಂದೆನೆ – ಬಾರಿಬಾರಿಗೆ
ಸತ್ತು ಹುಟ್ಟುವನೆಂದೆನೆ – ಆದಿಕೇಶವ
ಭಕ್ತವತ್ಸಲನೆಂದು ಪೊಗಳಿದೆನಲ್ಲದೆ || ೩ ||
ನಿನ್ನ ನಾನೇನೆಂದೆನೊ || ಪ ||
ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ
ಪನ್ನಗಶಯನ ಪಾಲ್ಗಡಲೊಡೆಯನೆ ರಂಗ || ಅ.ಪ. ||
ಧೀರ ಸೋಮಕ ವೇದಚೋರ ಖಳನನು ಸೀಳಿ
ವಾರಿಧಿಗಿಳಿದು ಪರ್ವತವನೆತ್ತಿ
ಧಾರಿಣಿಯನು ಕದ್ದ ದನುಜ ದಲ್ಲಣನಾದ
ನಾರಸಿಂಹ ನಿನಗೆ ನಮೊ ಎಂದೆನಲ್ಲದೆ
ನೀರ ಪೊಕ್ಕವನೆಂದೆನೆ – ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ –
ಮಣ್ಣನಗೆದು ಬೇರ ಮೆದ್ದವನೆಂದೆನೆ – ರಕ್ಕಸನೊಳು
ಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ || ೧ ||
ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿ
ಪರಶು ಪಿಡಿದು ಕ್ಷತ್ರಿಯರ ಸವರಿ
ಚರಣದಿ ಪಾಷಾಣ ಪೆಣ್ಣು ಮಾಡಿದ ಪುಣ್ಯ
ಚರಿತ ಯಾದವಪತಿ ಶರಣೆಂದೆನಲ್ಲದೆ
ತಿರುಕ ಹಾರುವನೆಂದೆನೆ – ಹೆತ್ತ ತಾಯ ಶಿರವ ತರಿದನೆಂದೆನೆ –
ವನವಾಸಕೆ ಭರದಿ ಚರಿಸಿದನೆಂದೆನೆ – ಪೂತನಿಯನು
ಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ || ೨ ||
ಚಿತ್ತಜಕೋಟಿ ಲಾವಣ್ಯ ಮುಪ್ಪುರದ
ಉತ್ತಮಸ್ತ್ರೀಯರ ವ್ರತವಳಿದು
ಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದ
ಹತ್ತವತಾರದ ಹರಿಯೆಂದೆನಲ್ಲದೆ
ಬತ್ತಲೆ ನಿಂತವನೆಂದೆನೆ – ತೇಜಿಯನೇರಿ
ಒತ್ತಿ ನಡೆದವನೆಂದೆನೆ – ಬಾರಿಬಾರಿಗೆ
ಸತ್ತು ಹುಟ್ಟುವನೆಂದೆನೆ – ಆದಿಕೇಶವ
ಭಕ್ತವತ್ಸಲನೆಂದು ಪೊಗಳಿದೆನಲ್ಲದೆ || ೩ ||