ನೋಡು ನೋಡು ಕಣ್ಣಾರ
ರಚನೆಕಾರ: ಆರ್ ಎನ್ ಜಯಗೋಪಾಲ್
ವರ್ಗ: ಪಾರ್ವತಿ
ನೋಡು ನೋಡು ಕಣ್ಣಾರ ನಿಂತಿಹಳು
ನಗುನಗುತಾ ಚಾಮುಂಡಿ ನಿಂತಿಹಳು || ಪ ||
ತಾಯಿ ಹೃದಯ ತಂದಾ ತುಂಬು ಮಮತೆಯಿಂದ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು || ೧ ||
ಮೈಸೂರು ನಗರದ ಬೆಟ್ಟದ ಮೇಲೆ
ಮಹಿಷಾಸುರ ಸೂದನಿಯ ವೈಭವ ಲೀಲೆ |
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ || ೨ ||
ನಂಬಿರುವ ಭಕ್ತರ ರಕ್ಷೆಗಾಗಿ
ನಂಬದಿಹ ದುಷ್ಟರ ಶಿಕ್ಷೆಗಾಗಿ |
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿದೈವವಾಗಿ || ೩ ||
ಉಕ್ಕಿಬಹ ನದಿಯಲ್ಲಿ ಅವಳ ನಗೆ
ಬೀಸಿಬಹ ಗಾಳಿಯಲ್ಲಿ ಅವಳುಸಿರು |
ಹಸಿಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ || ೪ ||
ನಗುನಗುತಾ ಚಾಮುಂಡಿ ನಿಂತಿಹಳು || ಪ ||
ತಾಯಿ ಹೃದಯ ತಂದಾ ತುಂಬು ಮಮತೆಯಿಂದ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು || ೧ ||
ಮೈಸೂರು ನಗರದ ಬೆಟ್ಟದ ಮೇಲೆ
ಮಹಿಷಾಸುರ ಸೂದನಿಯ ವೈಭವ ಲೀಲೆ |
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ || ೨ ||
ನಂಬಿರುವ ಭಕ್ತರ ರಕ್ಷೆಗಾಗಿ
ನಂಬದಿಹ ದುಷ್ಟರ ಶಿಕ್ಷೆಗಾಗಿ |
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿದೈವವಾಗಿ || ೩ ||
ಉಕ್ಕಿಬಹ ನದಿಯಲ್ಲಿ ಅವಳ ನಗೆ
ಬೀಸಿಬಹ ಗಾಳಿಯಲ್ಲಿ ಅವಳುಸಿರು |
ಹಸಿಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ || ೪ ||