ಓ ಎನ್ನು ಬಾ ಗಣಪಾ

ರಚನೆಕಾರ: ಅಜ್ಞಾತ

ವರ್ಗ: ಗಣೇಶ

ಓ ಎನ್ನು ಬಾ ಗಣಪಾ ಕರೆದಾಗ
ಓ ಎನ್ನು ಬಾ ಗಣಪಾ || ಪ ||

ಓಂಕಾರ ನಾದಲೋಲಾ ಹೇ ಗಣಪಾ |
ಓಂಕಾರ ರೂಪ ಹೇ ಗಣಪಾ || ೧ ||

ವಿಘ್ನ ವಿನಾಶಕ ಮೂಷಿಕ ವಾಹನ
ಶಿವ ಗಿರಿಜೆಯರ ಪ್ರೀತಿಯ ಕಂದನ
ಮಹಾ ಗಣಪತೆ ಪರಮ ದಯಾಘನ
ವಿದ್ಯಾಧೀಶನೇ ಕರೆವೆನು ನಾ || ೨ ||

ಗಜಮುಖದವನೆ ಗಣಗಳಿಗೊಡೆಯಾ
ಗಣಪತಿವಾಸ ಭಕ್ತರ ಹೃದಯ
ಆತ್ಮಲಿಂಗವನು ಧರೆಯಲಿಟ್ಟವನೇ
ಬಾಲ ಗಣೇಶನೇ ಕರೆವೆನು ನಾ || ೩ ||