ಪಾಲಿಸು ಗಿರಿಜಾತೆ

ರಚನೆಕಾರ: ಅಜ್ಞಾತ

ಗಾಯನ: ಧರಿತ್ರಿ ಆನಂದರಾವ್

ವರ್ಗ: ಪಾರ್ವತಿ

ಪಾಲಿಸು ಗಿರಿಜಾತೆ
ದಯಪರಿಪಾಲಿಸು ಗುಹಾಮಾತೆ || ಪ ||

ಪರಿಪರಿ ಜನುಮಗಳ ತಾಳುತ ನರಳಿದೆ ಪಾಪಗಳ |
ಪರಿಹರಿಸುತಲಿ ಭವಭಯ ಹಿಂಗಿಸಿ |
ಕರುಣಿಸು ನಿತ್ಯಾನಂದದ ಮುಕ್ತಿಯ || ೧ ||

ಅರಿಷಡ್ವರ್ಗವನು ನೀಗಿಸಿ ವರತವ ಭಕ್ತಿಯನು |
ನೆರೆ ತುಂಬಿಸಿ ಮನದನ್ಯ ವಿಚಾರದಿ |
ಹರಿಯದ ತೆರದಲಿ ಸ್ಥಿರ ಚಿತ್ತವನು || ೨ ||

ಶುಂಭ ನಿಶುಂಭರನು ವದಿಸಿದೆ |
ಶಾಂಭವಿ ಧರ್ಮವನು |
ಕುಂಭಿನಿಯೊಳು ನೀ ತುಂಬಿಸಿ ಸುಜನರಿ |
ಹಿಂಬಲು ತೋರುತ ಜಗವು ಉದ್ಧರಿಸಿದೆ || ೩ ||