ರಾಮ ನಾಮ ಪಾಯಸಕ್ಕೆ
ರಚನೆಕಾರ: ಪುರಂದರದಾಸರು
ವರ್ಗ: ವಿಠ್ಠಲ
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ |
ವಿಠ್ಠಲನಾಮವ ತುಪ್ಪವ ಬೆರಸಿ ಬಾಯ ಚಪ್ಪರೀಸಿರೋ || ಪ ||
ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ |
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಮಾಡಿರೋ || ೧ ||
ಹೃದಯವೆಂಬೊ ಪಾತ್ರದಲ್ಲಿ ಭಾವವೆಂಬ ಎಸರನಿಕ್ಕಿ |
ಬುದ್ಧಿಯಿಂದ ಪಾಕ ಮಾಡಿ ಅನಿರುದ್ಧ ಹರಿಯ ನೆನೆಯಿರೊ || ೨ ||
ಆನಂದೋ ಆನಂದವೆಂಬ ತೇಗು ಬಂತು ಕಾಣಿರೊ |
ಆನಂದ ಮೂರ್ತಿ ನಮ್ಮ ಪುರಂದರ ವಿಠಲನ ನೆನೆಯಿರೊ || ೩ ||