ರಂಗ ಬಾರೋ ಪಾಂಡುರಂಗ ಬಾರೋ

ರಚನೆಕಾರ: ಪುರಂದರದಾಸರು

ವರ್ಗ: ವಿಠ್ಠಲ

ರಂಗ ಬಾರೋ ಪಾಂಡುರಂಗ ಬಾರೋ
ಶ್ರೀರಂಗ ಬಾರೋ ನರಸಿಂಗ ಬಾರೋ || ಪ ||

ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾರಮಣ ಮುಕುಂದ ಬಾರೋ || ೧ ||

ಅಪ್ಪ ಬಾರೋ ತಿಮ್ಮಪ್ಪ ಬಾರೋ
ಕಂದರ್ಪನಯ್ಯನೇ ಕಂಚಿ ವರದ ಬಾರೋ || ೨ ||

ಅಣ್ಣ ಬಾರೋ ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿಯ ಚೆನ್ನ ಬಾರೋ || ೩ ||

ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ
ಎನ್ನಿಷ್ಟಮೂರ್ತಿ ಪುರಂದರ ವಿಠಲ ಬಾರೋ || ೪ ||