ರಂಗಾ ಮನೆಗೆ ಬಾರೊ
ರಚನೆಕಾರ: ಶ್ರೀಪಾದರಾಜರು
ವರ್ಗ: ಶ್ರೀಕೃಷ್ಣ
ರಂಗಾ ಮನೆಗೆ ಬಾರೊ ಕೃಪಾಂಗ ಶ್ರೀರಂಗ || ಪ ||
ರಂಗ ಕಲುಷವಿಭಂಗ ಗರುಡ ತು-
ರಂಗ ನವಮೋಹನಾಂಗ ಶ್ರೀರಂಗ || ಅ.ಪ. ||
ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟು
ಮೆಚ್ಚಿ ಮುದ್ದಾಡುವೆನು
ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ
ಸಪ್ತ ತಾಳಂಗಳನು ಬಿಚ್ಚಿದ
ಸಮುದ್ರವ ಸುತ್ತ ಮುಚ್ಚಿದ
ಎಚ್ಚರಿಕೆಯಲಿ ಲಂಕೆಯನು ಪೊಕ್ಕು
ಕಿಚ್ಚುಗಳ ಹಚ್ಚಿಸಿದ ಹನುಮನ
ಮೆಚ್ಚಿದ, ಖರದೂಷಣರ ಶಿರಗಳ
ಕೊಚ್ಚಿದ ಅಚ್ಯುತಾನಂತ || ೧ ||
ಮುತ್ತಿನ ಹಾರವನು ಕಂಠದೊಳಿಟ್ಟು
ಎತ್ತಿ ಮುದ್ದಾಡುವೆನು
ಹತ್ತಿದ ರಥವನು ಮುಂದೊತ್ತಿದ
ಕೌರವರ ಸೇನೆಗೆ ಮುತ್ತಿದ
ಉಭಯರಿಗೆ ಜಗಳವ ಬಿತ್ತಿದ
ಮತ್ತ ಮಾತಂಗಗಳನೆಲ್ಲ
ಒತ್ತರಿಸಿ ಮುಂದೊತ್ತಿ ನಡೆಯುತ
ಇತ್ತರದಿ ನಿಂತ ವರರಥಿಕರ
ಕತ್ತರಿಸಿ ಕಾಳಗವ ಮಾಡಿದ || ೨ ||
ಉಂಗುರಗಳನು ನಿನ್ನ ಅಂಗುಳಿಗಿಟ್ಟು
ಕಂಗಳಿಂದಲಿ ನೋಡುವೆ
ಹೆಂಗಳ ಉತ್ತುಂಗದ ಕುಚಂಗಳ
ಆಲಂಗಿಸಿದ ಭುಜಂಗಳ
ಕಮಲಸಮ ಪಾದಂಗಳ
ಹಿಂಗದೆ ಸ್ಮರಿಸಿದ ಮಾತಂಗನ
ಭಂಗವ ಪರಿಹರಿಸಿ ಬ್ಯಾಗದಿ
ಮಂಗಳ ಸ್ವರ್ಗವನಿತ್ತ ಉ-
ತ್ತುಂಗ ವಿಕ್ರಮ ರಂಗವಿಠಲನೆ || ೩ ||
ರಂಗ ಕಲುಷವಿಭಂಗ ಗರುಡ ತು-
ರಂಗ ನವಮೋಹನಾಂಗ ಶ್ರೀರಂಗ || ಅ.ಪ. ||
ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟು
ಮೆಚ್ಚಿ ಮುದ್ದಾಡುವೆನು
ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ
ಸಪ್ತ ತಾಳಂಗಳನು ಬಿಚ್ಚಿದ
ಸಮುದ್ರವ ಸುತ್ತ ಮುಚ್ಚಿದ
ಎಚ್ಚರಿಕೆಯಲಿ ಲಂಕೆಯನು ಪೊಕ್ಕು
ಕಿಚ್ಚುಗಳ ಹಚ್ಚಿಸಿದ ಹನುಮನ
ಮೆಚ್ಚಿದ, ಖರದೂಷಣರ ಶಿರಗಳ
ಕೊಚ್ಚಿದ ಅಚ್ಯುತಾನಂತ || ೧ ||
ಮುತ್ತಿನ ಹಾರವನು ಕಂಠದೊಳಿಟ್ಟು
ಎತ್ತಿ ಮುದ್ದಾಡುವೆನು
ಹತ್ತಿದ ರಥವನು ಮುಂದೊತ್ತಿದ
ಕೌರವರ ಸೇನೆಗೆ ಮುತ್ತಿದ
ಉಭಯರಿಗೆ ಜಗಳವ ಬಿತ್ತಿದ
ಮತ್ತ ಮಾತಂಗಗಳನೆಲ್ಲ
ಒತ್ತರಿಸಿ ಮುಂದೊತ್ತಿ ನಡೆಯುತ
ಇತ್ತರದಿ ನಿಂತ ವರರಥಿಕರ
ಕತ್ತರಿಸಿ ಕಾಳಗವ ಮಾಡಿದ || ೨ ||
ಉಂಗುರಗಳನು ನಿನ್ನ ಅಂಗುಳಿಗಿಟ್ಟು
ಕಂಗಳಿಂದಲಿ ನೋಡುವೆ
ಹೆಂಗಳ ಉತ್ತುಂಗದ ಕುಚಂಗಳ
ಆಲಂಗಿಸಿದ ಭುಜಂಗಳ
ಕಮಲಸಮ ಪಾದಂಗಳ
ಹಿಂಗದೆ ಸ್ಮರಿಸಿದ ಮಾತಂಗನ
ಭಂಗವ ಪರಿಹರಿಸಿ ಬ್ಯಾಗದಿ
ಮಂಗಳ ಸ್ವರ್ಗವನಿತ್ತ ಉ-
ತ್ತುಂಗ ವಿಕ್ರಮ ರಂಗವಿಠಲನೆ || ೩ ||