ಸದಾ ಎನ್ನ ಹೃದಯದಲ್ಲಿ
ರಚನೆಕಾರ: ಪುರಂದರದಾಸರು
ವರ್ಗ: ವಿಷ್ಣು
ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿ || ಪ ||
ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ || ಅ.ಪ ||
ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆನೋ || ೧ ||
ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೊ || ೨ ||
ನಿನ್ನ ನಾನು ಬಿಡುವನಲ್ಲಾ ಎನ್ನ ನೀನು ಬಿಡಲು ಸಲ್ಲಾ
ಘನ್ನಮಹಿಮ ವಿಜಯ ವಿಠಲ ನಿನ್ನ ಭಕ್ತರ ಕೇಳೊ ಸೊಲ್ಲ || ೩ ||