ಸಾಕು ಸಾಕು ಮನುಜಸೇವೆಯು
ರಚನೆಕಾರ: ಕನಕದಾಸರು
ವರ್ಗ: ಉಪದೇಶಾತ್ಮಕ
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು || ಪ ||
ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನು
ಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ || ಅ.ಪ. ||
ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದು
ಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ
ರಿಕ್ತಹಸ್ತದಿಂದ ಮನೆಯ ಸೇರುವೆ
ಆಸೆಗಾಗಿ ಮತ್ತೆ ಕಂಡ ಕಡೆಗೆ ತೊಲಗುವೆ
ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ || ೧ ||
ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದು
ಬಿಟ್ಟು ಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿ
ಶ್ವಾನನಂತೆ ದಿನವ ಕಳೆವೆನೊ
ದುರಾಸೆಯನ್ನು ಮನಸಿನಲ್ಲಿ ಮಡಗಿಕೊಂಡು ಕುದಿವೆನೊ
ಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ || ೨ ||
ಒಡಲಿನಾಸೆಗಾಗಿ ನೊಣನು ತುಡುಕಿಬಿದ್ದು ಜೇನ ಕೊಡದಿ
ಮಿಡುಕುವಂತೆ ಬಾಯಿಬಿಡುವೆ ಬಿಸರುಹಾಕ್ಷನೆ
ಬಿಡಿಸು ಎನ್ನ ಬಂಧಪಾಶವ ಕಾಗಿನೆಲೆಯಾದಿಕೇಶವ
ಕೊಡಿಸು ನಿನ್ನ ಭಕ್ತರ ಸಂಗವ
ಕನಕದಾಸನೊಡೆಯ ವೆಂಕಟಾದ್ರಿ ಮಾಧವ ರಂಗಯ್ಯ ರಂಗ || ೩ ||