ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ

ರಚನೆಕಾರ: ವಿಜಯ ದಾಸರು

ಗಾಯನ: ಶ್ರೀವಿದ್ಯಾ ಸುಧೀಂದ್ರ

ವರ್ಗ: ಗುರು ಕೀರ್ತನೆ

ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ |
ಘೋರಪಾತಕಾಂಭುದಿಯ ಪಾರು ಮಾಳ್ಪರಾ || ಪ ||

ಮೋದ ತೀರ್ಥರ ಮತವ ಸಾಧಿಸುವರಾ |
ಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ ||

ಭಾಷ್ಯತತ್ವವ ವಿಸ್ತಾರ ಮಾಳ್ಪಾರಾ |
ದೋಷ ದೂರರಾ ಆದಿ ಶೇಷವೇಷರಾ || ೨ ||

ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾ |
ನೇಮ ನಿತ್ಯರ ನಿಷ್ಕಾಮನಾಪರಾ || ೩ ||

ಮೋಕ್ಷದಾತರಾ ಅಕ್ಷೋಭ್ಯ ತೀರ್ಥರಾ |
ಸಾಕ್ಷಿ ಇಪ್ಪರಾ ಅಪೇಕ್ಷೆ ರಹಿತರಾ || ೪ ||

ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರಾ |
ಕುಜನ ಭಂಜರಾ ದಿಗ್ವಿಜಯ ರಾಯರಾ || ೫ ||