ಸತತ ಗಣನಾಥ
ರಚನೆಕಾರ: ಪುರಂದರದಾಸರು
ಗಾಯನ: ಶ್ರೀನಿಧಿ ರಾವ್
ವರ್ಗ: ಗಣೇಶ
ಸತತ ಗಣನಾಥ ಸಿದ್ಧಿಯ ನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿ ದೇವಿಯು || ಪ ||
ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು
ಭಕುತಿ ದಾಯಕಳು ಭಾರತಿದೇವಿ || ೧ ||
ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಇತ್ತು ಮತಿ
ಪಾಲಿಸುವ ನಮ್ಮ ಪವಮಾನನು || ೨ ||
ಚಿತ್ತದಲ್ಲಿ ಆನಂದ ಸುಖವ ನೀವಳು ರಮಾ
ಮುಕುತಿ ಪ್ರದಾಯಕ ಶ್ರೀ ಪುರಂದರ ವಿಠಲನು
ಸತತ ಇವರಲ್ಲಿ ನಿಂತು ಈ ಕೃತಿಯ ನಡೆಸುವನು || ೩ ||
ಮತಿ ಪ್ರೇರಿಸುವಳು ಪಾರ್ವತಿ ದೇವಿಯು || ಪ ||
ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು
ಭಕುತಿ ದಾಯಕಳು ಭಾರತಿದೇವಿ || ೧ ||
ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಇತ್ತು ಮತಿ
ಪಾಲಿಸುವ ನಮ್ಮ ಪವಮಾನನು || ೨ ||
ಚಿತ್ತದಲ್ಲಿ ಆನಂದ ಸುಖವ ನೀವಳು ರಮಾ
ಮುಕುತಿ ಪ್ರದಾಯಕ ಶ್ರೀ ಪುರಂದರ ವಿಠಲನು
ಸತತ ಇವರಲ್ಲಿ ನಿಂತು ಈ ಕೃತಿಯ ನಡೆಸುವನು || ೩ ||