ಶರಣು ನಿಮ್ಮ ಚರಣ ಕಮಲಗಳಿಗೆ ಶಿವ ಶಿವ

ರಚನೆಕಾರ: ಪ್ರಾಣೇಶದಾಸರು

ಗಾಯನ: ಯು ಶಾಂತ

ವರ್ಗ: ಈಶ್ವರ

ಶರಣು ನಿಮ್ಮ ಚರಣ ಕಮಲಗಳಿಗೆ ಶಿವ ಶಿವ |
ಕರ ಪಿಡಿದು ಮತಿ ಇತ್ತು ಪೊರೆಯೋ ಶಿವ ಶಿವ || ಪ ||

ದಂತಿ ಚರ್ಮ ಹೊತ್ತ ಭಸ್ಮ ಭೂಪ ಶಿವ ಶಿವ |
ಚಿಂತೆ ರಹಿತ ಲಯಕೆ ಕರ್ತನಾದ ಶಿವ ಶಿವ ||
ಸಂತರಿಂದ ಸತತ ಸೇವೆಗೊಂಬ ಶಿವ ಶಿವ |
ಕಂತು ಪಿತನ ಪ್ರೇಮ ಪಾತ್ರ ಪೂರ್ಣನೇ ಶಿವ ಶಿವ || ೧ ||

ಹೀನರಂತೆ ನಿಮಗೆ ಕೋಪವಿಲ್ಲ ಶಿವ ಶಿವ |
ಮಾನ ಯಜ್ಞ ಸಹಾಯನಾಗು ದಯದಿಂದ ಶಿವ ಶಿವ ||
ಏನು ಉಪಾಯ ಇದಕೆ ಚಿಂತಿಸುವುದು ಶಿವ ಶಿವ |
ಪ್ರಾಣೇಶ ವಿಠ್ಠಲ ನಿಮ್ಮ ವಶದೊಳಿಹನು ಶಿವ ಶಿವ || ೨ ||