ಶರಣು ಶರಣು ಶರಣು ದಶರಥ ರಾಮದೂತಗೆ
ರಚನೆಕಾರ: ಕನಕದಾಸರು
ವರ್ಗ: ಹನುಮಂತ
ಶರಣು ಶರಣು ಶರಣು ದಶರಥ ರಾಮದೂತಗೆ || ಪ ||
ಶರಣು ಕುರುಕುಲಾಧೀಶಗೆ
ಶರಣು ವೈಷ್ಣವ ಮತ ವಿಲಾಸಗೆ
ಶರಣು ಮುಖ್ಯಪ್ರಾಣಗೆ || ಅ.ಪ. ||
ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆ
ಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆ
ವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆ
ಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ || ೧ ||
ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆ
ರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆ
ತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆ
ರಾಜಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ || ೨ ||
ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆ
ಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆ
ಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆ
ಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ || ೩ ||
ಶರಣು ಕುರುಕುಲಾಧೀಶಗೆ
ಶರಣು ವೈಷ್ಣವ ಮತ ವಿಲಾಸಗೆ
ಶರಣು ಮುಖ್ಯಪ್ರಾಣಗೆ || ಅ.ಪ. ||
ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆ
ಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆ
ವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆ
ಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ || ೧ ||
ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆ
ರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆ
ತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆ
ರಾಜಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ || ೨ ||
ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆ
ಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆ
ಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆ
ಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ || ೩ ||