ಶರವು ಮಹಾ ಗಣಪತೀ

ರಚನೆಕಾರ: ಅಜ್ಞಾತ

ವರ್ಗ: ಗಣೇಶ

ಶರವು ಮಹಾ ಗಣಪತೀ ನಮಗೆ ನಿನ್ನದೇ ಸ್ತುತಿ |
ಅಣುದಿನವು ಭಕ್ತರು ನಿನ್ನ ನಂಬಿ ಇರುವರು |
ಶರವು ಮಹಾ ಗಣಪತೀ......... || ಪ ||

ಗಜಮುಖದ ದೇವನೇ ನಿನಗೆ ವಂದನೆ |
ಭಕ್ತಿಯ ಸೇವೆಯಲಿ ಆರಾಧನೆ |
ಕಷ್ಟಾಪರಿಹಾರಕೆ ಮಾರ್ಗದರ್ಶಕ |
ಕಾಪಾಡು ಕರುಣಾಳು ವಿಘ್ನನಾಶಕ || ೧ ||

ಶರವು ಶಿವಾಲಯದ ತೆಂಕು ದಿಕ್ಕಿನಲ್ಲಿ |
ದಿವ್ಯ ಮಹಾ ಗಣೇಶ ಅವತರಿಸಿದನಲ್ಲಿ |
ನಿತ್ಯವೂ ಎಡಬಿಡದೆ ನಾವು ವಂದಿಪೆ |
ಸಕಲ ಇಷ್ಟಾರ್ಥವ ಪರಿಪಾಲಿಸೋ || ೨ ||

ಪುಣ್ಯ ಪ್ರಸಾದವೇ ಪಂಚಕಜ್ಜಾಯ |
ಮುಕ್ತಿಯನ್ನು ನೀಡುವ ಭಕ್ತಜನಪ್ರಿಯ |
ಸತ್ಯ ಧರ್ಮದಿ ತೋರೋ ನಿನ್ನ ಮಾಯೆಯ |
ಶಾಸ್ತ್ರ ಸಂಪೂಜಿತ ಸಿದ್ಧಿವಿನಾಯಕ || ೩ ||