ಶಿವ ಶಿವ ಶಿವ ಎನ್ನಿರೊ

ರಚನೆಕಾರ: ಕನಕದಾಸರು

ವರ್ಗ: ಈಶ್ವರ

ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲ
ಶಿವ ಶಿವ ಶಿವ ಎನ್ನಿರೊ || ಪ ||

ಆಗಮ ಸಿದ್ಧಾಂತ ಮೂಲದ ಜಪವಿದು ಶಿವ ಶಿವ ಶಿವ ಎನ್ನಿರೊ –
ನಿಮ್ಮ ರೋಗದ ಮೂಲವ ಕೆಡಿಪ ಔಷಧವಿದು ಶಿವ ಶಿವ ಶಿವ ಎನ್ನಿರೊ || ಅ.ಪ. ||

ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವ ಶಿವ ಶಿವ ಎನ್ನಿರೊ –
ನಿಮ್ಮ ತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವ ಶಿವ ಶಿವ ಎನ್ನಿರೊ
ಅಪರಾಧಕೋಟಿ ತ್ಯಜಿಸಬೇಕಾದರೆ ಶಿವ ಶಿವ ಶಿವ ಎನ್ನಿರೊ –
ಮುಂದೆ ಉಪಮಿತ ರೋರ್ಮಿತ ರರಿಯದ ಜಪವಿದು ಶಿವ ಶಿವ ಶಿವ ಎನ್ನಿರೊ || ೧ ||

ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವ ಶಿವ ಶಿವ ಎನ್ನಿರೊ –
ನಿಜ ಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವ ಶಿವ ಶಿವ ಎನ್ನಿರೊ
ಭುವನಕೆ ಬಲ್ಲಿದರಾಗಬೇಕಾದರೆ ಶಿವ ಶಿವ ಶಿವ ಎನ್ನಿರೊ –
ನೀವು ಭವನ ಪದವಿಯನು ಪಡೆಯಬೇಕಾದರೆ ಶಿವ ಶಿವ ಶಿವ ಎನ್ನಿರೊ || ೨ ||

ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವ ಶಿವ ಶಿವ ಎನ್ನಿರೊ –
ಮುಂದೆ ಪರಮಾತ್ಮನ ನೀವು ತಿಳಿಯಬೇಕಾದರೆ ಶಿವ ಶಿವ ಶಿವ ಎನ್ನಿರೊ
ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವ ಶಿವ ಶಿವ ಎನ್ನಿರೊ –
ನೀವು ತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವ ಶಿವ ಶಿವ ಎನ್ನಿರೊ || ೩ ||