ಶ್ರೀ ರಾಮ ನಿನ್ನ ಪಾದವ ತೋರೋ
ರಚನೆಕಾರ: ಶ್ರೀಪಾದರಾಜರು
ವರ್ಗ: ಶ್ರೀರಾಮ
ಶ್ರೀ ರಾಮ ನಿನ್ನ ಪಾದವ ತೋರೋ
ಮೋಹನ ಗುಣಧಾಮ ನಿನ್ನ ಮೋಹದ ಪಾದವ || ಪ ||
ವರಗುಣಜಾಲ ಸುರಗುಣಲೋಲ
ಕರುಣಾಲವಾಲ ತರುಣೀ ಪರಿಪಾಲ || ೧ ||
ಅಜಭವಪೂಜಿತ ಗಜವರಭಾವಿತ
ಸುಜನರ ಸೇವಿತ ತ್ರಿಜಗವಂದಿತ || ೨ ||
ಅಂಗಜ ಜನಕ ವಿಹಂಗ ತುರಂಗ
ತುಂಗವಿಕ್ರಮ ಶ್ರೀರಂಗವಿಠಲ || ೩ ||
ಮೋಹನ ಗುಣಧಾಮ ನಿನ್ನ ಮೋಹದ ಪಾದವ || ಪ ||
ವರಗುಣಜಾಲ ಸುರಗುಣಲೋಲ
ಕರುಣಾಲವಾಲ ತರುಣೀ ಪರಿಪಾಲ || ೧ ||
ಅಜಭವಪೂಜಿತ ಗಜವರಭಾವಿತ
ಸುಜನರ ಸೇವಿತ ತ್ರಿಜಗವಂದಿತ || ೨ ||
ಅಂಗಜ ಜನಕ ವಿಹಂಗ ತುರಂಗ
ತುಂಗವಿಕ್ರಮ ಶ್ರೀರಂಗವಿಠಲ || ೩ ||