ತಂಬೂರಿ ಮೀಟಿದವ
ರಚನೆಕಾರ: ಪುರಂದರದಾಸರು
ವರ್ಗ: ವಿಠ್ಠಲ
ತಂಬೂರಿ ಮೀಟಿದವ
ಭವಾಬ್ಧಿ ದಾಟಿದವ || ಪ ||
ತಾಳವ ತಟ್ಟಿದವ
ಸುರರೊಳು ಸೇರಿದವ || ಅ.ಪ ||
ಗೆಜ್ಜೆಯ ಕಟ್ಟಿದವ
ಖಳರೆದೆಯ ಮೆಟ್ಟಿದವ
ಗಾನವ ಪಾಡಿದವ
ಹರಿಮೂರುತಿ ನೋಡಿದವ || ೧ ||
ವಿಠ್ಠಲನ ನೋಡಿದವ
ಪುರಂದರ ವಿಠ್ಠಲನ ನೋಡಿದವ
ವೈಕುಂಠಕೆ ಓಡಿದವ || ೨ ||
ಭವಾಬ್ಧಿ ದಾಟಿದವ || ಪ ||
ತಾಳವ ತಟ್ಟಿದವ
ಸುರರೊಳು ಸೇರಿದವ || ಅ.ಪ ||
ಗೆಜ್ಜೆಯ ಕಟ್ಟಿದವ
ಖಳರೆದೆಯ ಮೆಟ್ಟಿದವ
ಗಾನವ ಪಾಡಿದವ
ಹರಿಮೂರುತಿ ನೋಡಿದವ || ೧ ||
ವಿಠ್ಠಲನ ನೋಡಿದವ
ಪುರಂದರ ವಿಠ್ಠಲನ ನೋಡಿದವ
ವೈಕುಂಠಕೆ ಓಡಿದವ || ೨ ||