ತಂದೆ ನೀ ತಂದೆ ನಾ ಬಂದೆ

ರಚನೆಕಾರ: ಪುರಂದರದಾಸರು

ಗಾಯನ: ಶಾಂತಲಾ ಕೆ ಆರ್

ವರ್ಗ: ವಿಷ್ಣು

ತಂದೆ ನೀ ತಂದೆ ನಾ ಬಂದೆ ನಾ ನಿನ್ನ ಹಿಂದೆ || ಪ ||

ಕಾಮದಲಿ ನೀ ತಂದೆ ಕ್ರೋಧದಲಿ ನೀ ತಂದೆ ||

ತಾಮಸ ದುರ್ಯೋನಿಯಲ್ಲಿ ನೀ ತಂದೆ ನಾ ಬಂದೆ |
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ |
ಎಪ್ಪತ್ತನಾಲ್ಕು ಲಕ್ಷ ಯೋನಿಯಲ್ಲಿ ನೀ ತಂದೆ ನಾ ಬಂದೆ |
ಹಿಂದಿನ ಜನ್ಮ ಹೇಂಗಾದರಾಗಲಿ ಮುಂದೆನ್ನ ಸಲಹೊ ಪುರಂದರವಿಠಲ || ೧ ||