ಉಡಿಯ ತುಂಬಿರೆ ನಮ್ಮ

ರಚನೆಕಾರ: ಹರಪನಹಳ್ಳಿ ಭೀಮವ್ವ

ಗಾಯನ: ಸಂಪದಾ ಕಲಘಟಗಿ

ವರ್ಗ: ಲಕ್ಷ್ಮಿ

ಉಡಿಯ ತುಂಬಿರೆ ನಮ್ಮ
ಉಡುರಾಜಮುಖಿಗೆ || ಪ ||

ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗ-
ಳ್ವುಡಿಯ ತುಂಬಿರೆ ನಮ್ಮ || ಅ.ಪ ||

ಜಂಬುನೇರಲ ಗೊನೆ ಜಾಂಬೂಫಲಗಳು
ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು || ೧ ||

ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು
ಅಕ್ಕಿ ಅಂಜೂರ ಉತ್ತತ್ತಿ ಫಲಗಳು || ೨ ||

ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿ
ಘಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ || ೩ ||