ವಂದಿಪೆ ನಿನಗೆ ಗಣನಾಥ

ರಚನೆಕಾರ: ಶ್ರೀಪಾದರಾಜರು

ವರ್ಗ: ಗಣೇಶ

ವಂದಿಪೆ ನಿನಗೆ ಗಣನಾಥ |
ಮೊದಲೊಂದಿಪೆ ನಿನಗೆ ಗಣನಾಥ || ಪ ||

ಬಂದ ವಿಘ್ನಗಳ ಕಳೆ ಗಣನಾಥ |
ಆದಿಯೊಳು ನಿನ್ನ ಪಾದ ಪೂಜಿಸಿದ ಧರ್ಮರಾಯ |
ಸಾಧಿಸಿದ ರಾಜ್ಯವ ಗಣನಾಥ || ೧ ||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ |
ಸಂದನು ರಣದಲಿ ಗಣನಾಥ || ೨ ||

ಮಂಗಳ ಮೂರ್ತಿ ಗುರು ರಂಗವಿಠಲನ ಪಾದ |
ಭೃಂಗನೆ ಪಾಲಿಸು ಗಣನಾಥ || ೩ ||