ವಿಜಯೀಂದ್ರ ಯತಿಯ ಕಂಡೆ

ರಚನೆಕಾರ: ಪುರಂದರದಾಸರು

ವರ್ಗ: ಗುರು ಕೀರ್ತನೆ

ವಿಜಯೀಂದ್ರ ಯತಿಯ ಕಂಡೆ ಮುದಗೊಂಡೆ
ವಿಜಯ ಡಂಗುರ ಹೊಯಿಸಿ ಗಜವೇರಿ ಬರುತಿಪ್ಪ || ಪ ||

ನಿಜದಿ ಲಿಂಗಣ್ಣನ ಗೆಲಿದು ಮಠವನು ಪಡೆದು
ಸುಜನರ ಭಯ ಪರಿಹರಿಸುತ ಮೆರೆಯುವ || ೧ ||

ಹರಿಯೇ ಪರನೆಂಬ ಸರ್ವಶಾಸ್ತ್ರ ಕೋವಿದನ
ಧರಣೀಶನುತ ವ್ಯಾಸಮುನಿಯ ವಿದ್ಯಾಸುತನ || ೨ ||

ಸುಖಮುನಿಯಾಸ್ಥಾನ ರಾಜನ ವರತೇಜನ
ಅಕಳಂಕ ಮಹಿಮ ಸಿರಿ ಸುರೇಂದ್ರನ ಕುವರನ || ೩ ||

ಚೌಷಷ್ಟಿ ಕಳೆಗಳರಿತನ ಮಾಯಿಭೀಕರಣ
ಶ್ರೀಶ ಗುರು ಪುರಂದರ ವಿಠ್ಠಲನ್ನ ಭಜಿಪನ್ನ || ೪ ||