ಯಾದವರಾಯ ಬೃಂದಾವನದೊಳು

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಯಾದವರಾಯ ಬೃಂದಾವನದೊಳು
ವೇಣುನಾದವ ಮಾಡುತಿರೆ || ಪ ||

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈಮರೆತಿರೆ || ಅ.ಪ ||

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆ || ೧ ||

ಅರವಿಂದದಳನಯನ
ಕರುಗಳ ಸಹಿತಲೇ ಗೋಕುಲವೆಲ್ಲ
ಸಿರಿ ಕಾಗಿನೆಲೆಯಾದಿಕೇಶವರಾಯ
ತರುಗಳ ಸಹಿತಲೇ ವರಗೋಪಾಲ || ೨ ||