ಯಾರೇ ಬಂದವರು
ರಚನೆಕಾರ: ಪುರಂದರದಾಸರು
ಗಾಯನ: ಶಶಿಕಾಂತ ರಾವ್
ವರ್ಗ: ಶ್ರೀಕೃಷ್ಣ
ಯಾರೇ ಬಂದವರು ಮನೆಗೆ ಮ-
ತ್ಯಾರೇ ಬಂದವರು || ಪ ||
ನಾರಾಯಣ ಕೃಷ್ಣನಾಥನಲ್ಲದೆ ಬೇರೆ || ಅ.ಪ ||
ವಜ್ರರೇಖೆಗಳಿವೆ ಮನೆಯಲ್ಲಿ, ಕಾಲ
ಗೆಜ್ಜೆ ಧ್ವನಿ ಕೇಳಿ ಬರುತಿದೆ
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ || ೧ ||
ಕೊಂಬು ಕೊಳಲು ರಭಸಗಳಿವೆ, ಕ-
ದಂಬ ಕಸ್ತೂರಿ ಪೆಂಪೆಸೆದಿವೆ
ಪೊಂಬಟ್ಟೆ ಚಲ್ಲಣ ಚೆಲ್ಲಿದೆ ಹಾಲು
ಕುಂಭ ಒಡೆದು ಮನೆ ತುಂಬ ಬೆಳ್ಳಗಾಯಿತು || ೨ ||
ಮಿಂಚು ಹುಳದಂತೆ ಹೊಳೆವುತ, ತಮ್ಮ
ಸಂಚರರೊಡಗೂಡಿ ಚಲಿಸುತ್ತ
ವಂಚಿಸಿ ಬೆಣ್ಣೆಯ ಮೆಲ್ಲುತ, ನಮ್ಮ
ಲಂಚದ ಪುರಂದರವಿಠಲನಲ್ಲದೆ ಬೇರೇ || ೩ ||
ತ್ಯಾರೇ ಬಂದವರು || ಪ ||
ನಾರಾಯಣ ಕೃಷ್ಣನಾಥನಲ್ಲದೆ ಬೇರೆ || ಅ.ಪ ||
ವಜ್ರರೇಖೆಗಳಿವೆ ಮನೆಯಲ್ಲಿ, ಕಾಲ
ಗೆಜ್ಜೆ ಧ್ವನಿ ಕೇಳಿ ಬರುತಿದೆ
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ || ೧ ||
ಕೊಂಬು ಕೊಳಲು ರಭಸಗಳಿವೆ, ಕ-
ದಂಬ ಕಸ್ತೂರಿ ಪೆಂಪೆಸೆದಿವೆ
ಪೊಂಬಟ್ಟೆ ಚಲ್ಲಣ ಚೆಲ್ಲಿದೆ ಹಾಲು
ಕುಂಭ ಒಡೆದು ಮನೆ ತುಂಬ ಬೆಳ್ಳಗಾಯಿತು || ೨ ||
ಮಿಂಚು ಹುಳದಂತೆ ಹೊಳೆವುತ, ತಮ್ಮ
ಸಂಚರರೊಡಗೂಡಿ ಚಲಿಸುತ್ತ
ವಂಚಿಸಿ ಬೆಣ್ಣೆಯ ಮೆಲ್ಲುತ, ನಮ್ಮ
ಲಂಚದ ಪುರಂದರವಿಠಲನಲ್ಲದೆ ಬೇರೇ || ೩ ||