ಯಾರೇ ರಂಗನ ಕರೆಯ ಬಂದವರು
ರಚನೆಕಾರ: ಪುರಂದರದಾಸರು
ವರ್ಗ: ಶ್ರೀಕೃಷ್ಣ
ಯಾರೇ ರಂಗನ ಕರೆಯ ಬಂದವರು
ಯಾರೇ ರಂಗನ ಕರೆಯ ಬಂದವರು |
ಯಾರೇ ಕೃಷ್ಣನ ಕರೆಯ ಬಂದವರು || ಪ ||
ಯಾರೇ ರಂಗನ | ಯಾರೇ ಕೃಷ್ಣನ |
ಕರೆಯ ಬಂದವರು || ಅ.ಪ ||
ಗೋಪಾಲಕೃಷ್ಣನ ಪಾಪವಿನಾಶನ |
ಈ ಪರಿಯಿಂದಲೀ ಕರೆಯ ಬಂದವರು || ೧ ||
ವೇಣು ವಿನೋದನ ಪ್ರಾಣಪ್ರಿಯನ |
ಜಾಣೆಯರರಸನ ಕರೆಯ ಬಂದವರು || ೨ ||
ಕರಿರಾಜವರದನ ಪರಮಪುರುಷನ |
ಪುರಂದರವಿಠಲನ ಕರೆಯ ಬಂದವರು || ೩ ||
ಯಾರೇ ರಂಗನ ಕರೆಯ ಬಂದವರು |
ಯಾರೇ ಕೃಷ್ಣನ ಕರೆಯ ಬಂದವರು || ಪ ||
ಯಾರೇ ರಂಗನ | ಯಾರೇ ಕೃಷ್ಣನ |
ಕರೆಯ ಬಂದವರು || ಅ.ಪ ||
ಗೋಪಾಲಕೃಷ್ಣನ ಪಾಪವಿನಾಶನ |
ಈ ಪರಿಯಿಂದಲೀ ಕರೆಯ ಬಂದವರು || ೧ ||
ವೇಣು ವಿನೋದನ ಪ್ರಾಣಪ್ರಿಯನ |
ಜಾಣೆಯರರಸನ ಕರೆಯ ಬಂದವರು || ೨ ||
ಕರಿರಾಜವರದನ ಪರಮಪುರುಷನ |
ಪುರಂದರವಿಠಲನ ಕರೆಯ ಬಂದವರು || ೩ ||