ಯಶೋದೆಯಮ್ಮ
ರಚನೆಕಾರ: ಪುರಂದರದಾಸರು
ವರ್ಗ: ಶ್ರೀಕೃಷ್ಣ
ಯಶೋದೆಯಮ್ಮ, ಎನ್ನನು ಎತ್ತಿಕೊಳ್ಳಮ್ಮ || ಪ ||
ಬಿಸಿನೀರು ಕಾಸಬೇಡೆ
ಅಮ್ಮ ನೀನು ಗುಕ್ಕಿಸಿ ಮಾಡಬೇಡೆ
ಬಿಸಿ ಮೊಮ್ಮ ಉಪ್ಪಿನಕಾಯಿ ಅಮ್ಮ ನಾನು ಉಣಲಾರೆ
ಉತ್ತುತ್ತೆ ಹಣ್ಣು ಬೆಣ್ಣೆ ತಿಂದೇನೆ || ೧ ||
ಕಳ್ಳ ಕೃಷ್ಣ ಎನ್ನುತಾರೆ
ಬಂದನೆಂದು ಬೇಗ ಬೇಗ ತಿನ್ನುತಾರೆ
ಗಲ್ಲ ಕಚ್ಚಿ ಕಚ್ಚಿ ಎನ್ನ ಹಲ್ಲು ಬಾಯಿ ನೋಯುತಿದೆ
ವಲ್ಲಭೇರು ಎನ್ನ ಗೋಪಿ ಕೊಲ್ಲುತಾರೆ || ೨ ||
ಸುಮ್ಮಾನೆ ಮಲಗಬೇಡ
ಅಮ್ಮ ನೀನು ಎನ್ನ ಕಡೆ ಮೋರೆ ಮಾಡೆ
ಚಿಕ್ಕಹಾವು ಕಂಡೆನೆ ಅಂಜಿಕೆ ಬರುತಿದೆ
ಕ್ಷಣ ಹೊತ್ತು ಎನ್ನ ಕೂಡೇ ಮಾತನಾಡೆ || ೩ ||
ನಕ್ಷತ್ರ ತಂದುಕೊಡೇ
ಚಂದ್ರಮನ ಇತ್ತಿತ್ತ ಕರೆದು ತಾರೆ
ಈಕ್ಷಿಸಿ ನಲಿವಂಥ ಪುರಂದರವಿಠಲನ
ಒಂದು ಬಾರಿ ಮುದ್ದಾಡಿ ಚಂದ ನೋಡೆ || ೪ ||
ಬಿಸಿನೀರು ಕಾಸಬೇಡೆ
ಅಮ್ಮ ನೀನು ಗುಕ್ಕಿಸಿ ಮಾಡಬೇಡೆ
ಬಿಸಿ ಮೊಮ್ಮ ಉಪ್ಪಿನಕಾಯಿ ಅಮ್ಮ ನಾನು ಉಣಲಾರೆ
ಉತ್ತುತ್ತೆ ಹಣ್ಣು ಬೆಣ್ಣೆ ತಿಂದೇನೆ || ೧ ||
ಕಳ್ಳ ಕೃಷ್ಣ ಎನ್ನುತಾರೆ
ಬಂದನೆಂದು ಬೇಗ ಬೇಗ ತಿನ್ನುತಾರೆ
ಗಲ್ಲ ಕಚ್ಚಿ ಕಚ್ಚಿ ಎನ್ನ ಹಲ್ಲು ಬಾಯಿ ನೋಯುತಿದೆ
ವಲ್ಲಭೇರು ಎನ್ನ ಗೋಪಿ ಕೊಲ್ಲುತಾರೆ || ೨ ||
ಸುಮ್ಮಾನೆ ಮಲಗಬೇಡ
ಅಮ್ಮ ನೀನು ಎನ್ನ ಕಡೆ ಮೋರೆ ಮಾಡೆ
ಚಿಕ್ಕಹಾವು ಕಂಡೆನೆ ಅಂಜಿಕೆ ಬರುತಿದೆ
ಕ್ಷಣ ಹೊತ್ತು ಎನ್ನ ಕೂಡೇ ಮಾತನಾಡೆ || ೩ ||
ನಕ್ಷತ್ರ ತಂದುಕೊಡೇ
ಚಂದ್ರಮನ ಇತ್ತಿತ್ತ ಕರೆದು ತಾರೆ
ಈಕ್ಷಿಸಿ ನಲಿವಂಥ ಪುರಂದರವಿಠಲನ
ಒಂದು ಬಾರಿ ಮುದ್ದಾಡಿ ಚಂದ ನೋಡೆ || ೪ ||